ಬಹು ನಿರೀಕ್ಷೆಯ ಪಿಡಿಒ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಯ ವಿವರವಾದ ಸಿಲಬಸ್ ಅನ್ನು ಪ್ರಕಟಿಸಿದೆ. ಈ ಭಾರಿ ಸಿಲಬಸ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ನಿರ್ದಿಷ್ಟ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗೆ ಸಂಬಂಧಿಸಿದಂತೆ ಯಾವೆಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕೆಂದು ನೋಡೋಣ; * ಗ್ರಾಮ ಪಂಚಾಯಿತಿಗಳ ರಚನೆ : ಗ್ರಾಮ ಪಂಚಾಯ್ತಿ ಪ್ರದೇಶದ ಘೋಷಣೆ, ಗ್ರಾಮ ಪಂಚಾಯ್ತಿಗಳ ಸ್ಥಾಪನೆ, ಗ್ರಾಮ ಪಂಚಾಯ್ತಿ ರಚನೆ, ಸ್ಥಾಯಿ ಸಮಿತಿ ಮತದಾನ ವಿಧಾನ ಮತ್ತು ಚುನಾವಣಾ ಕಾರ್ಯವಿಧಾನ, ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯ ನೇಮಕ, ಮತದಾರರ ಪಟ್ಟಿ, ಭ್ರಷ್ಟಾಚಾರಗಳು, ಸದಸ್ಯರ ರಾಜೀನಾಮೆ, ಗ್ರಾಮ ಪಂಚಾಯಿತಿ ಸ್ಥಾಪನೆಯಾದಾಗ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಕಾರ್ಯವಿಧಾನ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯ ಅವಧಿ ಮತ್ತು ಸೇವಾ ಷರತ್ತುಗಳು, ಸಭೆಗಳ ಕಾರ್ಯ ವಿಧಾನ, ಗ್ರಾಮ ಪಂಚಾಯ್ತಿ ಸಭೆ, ಕೋರಂ ಮತ್ತು ಕಾರ್ಯವಿಧಾನ, ನಡವಳಿಗಳು, ನಡವಳಿ ಪುಸ್ತಕ, ವಾರ್ಡ್ ಸಭೆ, ಗ್ರಾಮ ಸಭೆ ಇತ್ಯಾದಿ ವಿಷಯ ತಿಳಿದುಕೊಂಡಿರಬೇಕು. * ಗ್ರಾಮ ಪಂಚಾಯ್ತಿಗಳ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಪ್ರಕಾರ್ಯಗಳು, ಕರ್ತವ್ಯಗಳು ಮತ್ತು ಅಧಿಕಾರ : ಗ್ರಾಮ ಪಂಚಾಯ್ತಿಗಳ ಕರ್ತವ್ಯಗಳು, ಗ್ರಾಮ ಪಂಚಾಯ್ತಿಯ ಸಾಮಾನ್ಯ ಅಧಿಕಾರಗಳು, ಸ್ಥಾಯಿ ಸಮಿತಿಗಳು, ಇತರ ಸಮಿತಿಗಳು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕರ್ತವ್ಯಗಳು ಮತ್ತು ಅಧಿಕಾರಗಳು, ರಸ್ತೆಗಳು, ಸೇತುವೆಗಳು ಮುಂತಾದವುಗಳ ಬಗ್ಗೆ ಗ್ರಾಮ ಪಂಚಾಯಿತಿಯ ಅಧಿಕಾರ, ಕಟ್ಟಡಗಳ ನಿರ್ಮಾಣದ ಬಗ್ಗೆ ನಿಯಂತ್ರಣ, ಅಂಗಡಿಗಳಿಗೆ ಲೈಸನ್ಸ್ ಕೊಡುವುದು, ಗ್ರಾಮ ಪಂಚಾಯಿತಿಗಳಿಗೆ ಸಂಸ್ಥೆಗಳು ಅಥವಾ ಕಾಮಗಾರಿಗಳ ನಿರ್ವಹಣೆ, ನೀರು ಸರಬರಾಜಿನ ಬಗ್ಗೆ ಮೂಲಗಳ ಜವಾಬ್ದಾರಿ ಮತ್ತು ಕರ್ತವ್ಯಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷನ ಗೌರವ ಧನ ಮತ್ತು ಭತ್ಯೆಗಳು. * ಗ್ರಾಮ ಪಂಚಾಯ್ತಿಗಳ ಸಿಬ್ಬಂದಿ : ಕಾರ್ಯದರ್ಶಿ, ಸಿಬ್ಬಂದಿ ಸ್ವರೂಪ ಮತ್ತು ಉದ್ಯೋಗಿಗಳ ಪಟ್ಟಿ, ನೌಕರರ ನೇಮಕಾತಿ ಮತ್ತು ನಿಯಂತ್ರಣ. ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ತಾಂತ್ರಿಕ ಸಿಬ್ಬಂದಿಯ ವ್ಯವಸ್ಥೆ. * ಚಿಕ್ಕ ನಗರ ಪ್ರದೇಶ ಅಥವಾ ಪರಿವರ್ತಿತವಾಗಲಿರುವ ಪ್ರದೇಶದ ಪರಿವರ್ತನೆ ಮತ್ತು ಸಂಯೋಜನೆ : ಚಿP್ಕUನಗರ ಪ್ರದೇಶ ಅಥವಾ ಪರಿವರ್ತಿತವಾಗಲಿರುವ ಪ್ರದೇಶವನ್ನು ಪಂಚಾಯಿತಿ ಪ್ರದೇಶವನ್ನಾಗಿ ಪರಿವರ್ತಿಸುವುದರ ಪರಿಣಾಮ, ಮಧ್ಯಕಾಲೀನ ಗ್ರಾಮ ಪಂಚಾಯಿತಿಯ ಸದಸ್ಯರ ಹುದ್ದೆಯ ಅವಧಿ ಮತ್ತು ಅವರ ಅಧಿಕಾರಗಳು, ಪಂಚಾಯಿತಿ ಪ್ರದೇಶಗಳ ಸಂಯೋಜನೆಯ ಪರಿಣಾಮ. * ತೆರಿಗೆಗಳು ಮತ್ತು ಶುಲ್ಕಗಳು: ಗ್ರಾಮ ಪಂಚಾಯ್ತಿಗಳು ತೆರಿಗೆಗಳ ದರ ವಿಧಿಸುವುದು, ತೆರಿಗೆಗಳು ಮತ್ತು ಇತರ ಬಾಕಿಗಳ ವಸೂಲಿ, ತೆರಿಗೆ ನಿರ್ಧಾರಣೆ ಮುಂತಾದವುಗಳ ವಿರುದ್ಧ ಅಪೀಲು, ಕಾರ್ಖಾನೆ ಪ್ರದೇಶಗಳಲ್ಲಿ ತೆರಿಗೆಗಳ ಬಗ್ಗೆ ರಾಜಿ ಮಾಡಿಕೊಳ್ಳುವುದು ಇತ್ಯಾದಿ. * ಗ್ರಾಮ ಪಂಚಾಯ್ತಿಗಳ ಅನುದಾನ ಮತ್ತು ನಿಧಿಗಳು : ಗ್ರಾಮ ಪಂಚಾಯ್ತಿಗಳಿಗೆ ಅನುದಾನ, ವಿವೇಚನಾತ್ಮಕ ಅನುದಾನ, ಗ್ರಾಮ ಪಂಚಾಯ್ತಿಯ ನಿಧಿ, ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸಿಬ್ಬಂದಿ ಅನುದಾನ. * ಹಣಕಾಸು ನಿಯಂತ್ರಣ ಮತ್ತು ಲೆಕ್ಕ ಪರಿಶೋಧನೆ : ಗ್ರಾಮ ಪಂಚಾಯ್ತಿಗಳ ಲೆಕ್ಕಗಳ ಮತ್ತು ಬಜೆಟ್ ಮಂಡನೆ, ಬಜೆಟ್ ಪರಿಷ್ಕರಣೆ, ಲೆಕ್ಕಪತ್ರಗಳ ಪರಿಶೋಧನೆ. ತಾಲ್ಲೂಕು ಪಂಚಾಯ್ತಿಗಳ ಲೆಕ್ಕಪತ್ರಗಳ ಮತ್ತು ಬಜೆಟ್ ಮಂಡನೆ, ಬಜೆಟ್ ಪರಿಷ್ಕರಣೆ, ಲೆಕ್ಕಪತ್ರಗಳ ಪರಿಶೋಧನೆ, ಜಿಲ್ಲಾ ಪಂಚಾಯ್ತಿಗಳ ಲೆಕ್ಕಪತ್ರಗಳ ಮತ್ತು ಬಜೆಟ್ ಮಂಡನೆ, ಬಜೆಟ್ ಪರಿಷ್ಕರಣೆ, ಲೆಕ್ಕಪತ್ರಗಳ ಪರಿಶೋಧನೆ. * ತಾಲ್ಲೂಕು ಪಂಚಾಯ್ತಿ ರಚನೆ: ತಾಲ್ಲೂಕು ಪಂಚಾಯ್ತಿ ರಚನೆ, ತಾಲ್ಲೂಕು ಪಂಚಾಯ್ತಿ ಸಭೆಗಳು, ತಾಲ್ಲೂಕು ಪಂಚಾಯ್ತಿಯ ಕರ್ತವ್ಯಗಳು, ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಅಧಿಕಾರಗಳು, ತಾಲ್ಲೂಕು ಪಂಚಾಯ್ತಿ ನಿಧಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳು, ಸ್ಥಾಯಿ ಸಮಿತಿ, ಕಾರ್ಯ ನಿರ್ವಾಹಕಾಧಿಕಾರಿ, ಅಧಿಕಾರ ಮತ್ತು ಕರ್ತವ್ಯಗಳು. ಇತರ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಕರ್ತವ್ಯ, ದಾಖಲೆ ಇತ್ಯಾದಿಗಳನ್ನು ಕಡ್ಡಾಯವಾಗಿ ಕೋರಲು ಕಾರ್ಯ ನಿರ್ವಾಹಕಧಿಕಾರಿಯ ಹಕ್ಕು. * ಜಿಲ್ಲಾ ಪಂಚಾಯ್ತಿ ರಚನೆ: ಜಿಲ್ಲಾ ಪಂಚಾಯ್ತಿ ರಚನೆ, ಜಿಲ್ಲಾ ಪಂಚಾಯ್ತಿ ಸಭೆಗಳು, ನಡವಳಿಗಳು, ಜಿಲ್ಲಾ ಪಂಚಾಯ್ತಿಯ ಕರ್ತವ್ಯಗಳು, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಅಧಿಕಾರಗಳು, ಜಿಲ್ಲಾ ಪಂಚಾಯ್ತಿ ನಿಧಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳು, ಸ್ಥಾಯಿ ಸಮಿತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಧಿಕಾರ ಮತ್ತು ಕರ್ತವ್ಯಗಳು, ಇತರ ಅಧಿಕಾರಿಗಳ ಕಾರ್ಯಗಳು, ಅಧಿಕಾರಗಳು ಮತ್ತು ಕರ್ತವ್ಯಗಳು, ದಾಖಲೆ ಮುಂತಾದವುಗಳನ್ನು ಕಡ್ಡಾಯವಾಗಿ ಕೋರುವುದಕ್ಕಾಗಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯ ಹಕ್ಕು ಇತ್ಯಾದಿ. * ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ: ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆಯ ಅಧಿಕಾರ, ತಾಂತ್ರಿಕ ಮೇಲ್ವಿಚಾರಣೆ ಮತ್ತು ಪರಿವೀಕ್ಷಣೆ, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗೆ ಸಂಬಂಧಪಟ್ಟಂತೆ ಸರ್ಕಾರದ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಅಧಿಕಾರಗಳು, ಗ್ರಾಮ ಪಂಚಾಯ್ತಿಯು, ತಾಲ್ಲೂಕು ಪಂಚಾಯ್ತಿಯು ಅಥವಾ ಜಿಲ್ಲಾ ಪಂಚಾಯ್ತಿಯು ತಪ್ಪು ಎಸಗಿದ್ದಾಗ ಕರ್ತವ್ಯಗಳನ್ನು ನೆರವೇರಿಸಲು ಸರ್ಕಾರದ ಅಥವಾ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಯ ಅಧಿಕಾರಗಳು, ಗ್ರಾಮ ಪಂಚಾಯಿತಿಯ, ತಾಲ್ಲೂಕು ಪಂಚಾಯಿತಿಯ, ಜಿಲ್ಲಾ ಪಂಚಾಯಿತಿಯ ವ್ಯವಹಾರಗಳ ಬಗ್ಗೆ ಸರ್ಕಾರವು ವಿಚಾರಣೆ ನಡೆಸುವುದು. *ಸಂಕೀರ್ಣ:- ಪಂಚಾಯಿತಿಗಳ ವಿಸರ್ಜನೆ, ಅಪೀಲುಗಳು, ಹಣಕಾಸು ಆಯೋಗ ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಯೋಜನಾ ಸಮಿತಿ, ರಾಜ್ಯ ಪಂಚಾಯ್ತಿ ಪರಿಷತ್ತು. *ವಿಶೇಷ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು: 14 ನೇ ಹಣಕಾಸು ಯೋಜನೆ, ಗ್ರಾಮ ಸ್ವರಾಜ್, ಸುವರ್ಣ ಗ್ರಾಮೋದಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಸ್ವಚ್ಛ ಭಾರತ ಅಭಿಯಾನ, ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ), ರಾಜಿವ್ ಗಾಂಧಿ ಯುವ ಚೈತನ್ಯ ಯೋಜನೆ ಇತ್ಯಾದಿ ಯೋಜೆಗಳ ಬಗ್ಗೆ.